ಸುದೀಪ್ ಈಗ ಕನ್ನಡ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ . ಸುದೀಪ್ ಈಗ ಬರಿ ಕನ್ನಡಕ್ಕೆ ಸೀಮಿತರಾಗಿರುವ ನಟನಾಗಿ ಉಳಿದುಕೊಂಡಿಲ್ಲ. ತಮಿಳು, ತೆಲುಗು ಹಿಂದಿ ಅಷ್ಟೇ ಅಲ್ಲದೆ ಹಾಲಿವುಡ್ ನಲ್ಲಿಯೂ ಕನ್ನಡದ ಈ ಆರಡಿ ಕಟ್ ಔಟ್ ಅಬ್ಬರಿಸುತ್ತಿದ್ದಾರೆ. ಸುದೀಪ್ ಜನಪ್ರಿಯತೆ, ಅವರ ಡಿಮ್ಯಾಂಡ್ ಹೆಚ್ಚಾಗುತ್ತಿದ್ದ ಹಾಗೆ ಅವರ ಸಂಭಾವನೆ ಕೂಡ ಹೆಚ್ಚಾಗಿದೆ. ಸುದೀಪ್ ತಮ್ಮ ಹೊಸ ಚಿತ್ರಕ್ಕೆ ಪಡೆಯುತ್ತಿರುವ ಪೇಮೆಂಟ್ ಬರೋಬ್ಬರಿ 8 ಕೋಟಿ. ಇತ್ತೀಚಿಗಷ್ಟೆ ನಟ ಧ್ರುವ ಸರ್ಜಾ ಅವರ 6 ಕೋಟಿ ಸಂಭಾವನೆ ಬಗ್ಗೆ ಗಾಂಧಿನಗರದಲ್ಲಿ ದೊಡ್ಡ ಸುದ್ದಿ ಆಗಿತ್ತು. ಆದರೆ ಅದರ ಹಿಂದೆಯೇ ಇದೀಗ ಸುದೀಪ್ ಸಂಭಾವನೆ ಬಗ್ಗೆ ಕೂಡ ಟಾಕ್ ಶುರು ಆಗಿದೆ.ರ್ಮಾಪಕ ಸೂರಪ್ಪ ಬಾಬು ತಮ್ಮ 'ಕೋಟಿಗೊಬ್ಬ 3' ಚಿತ್ರಕ್ಕಾಗಿ ಸುದೀಪ್ ಅವರಿಗೆ 8 ಕೋಟಿ ಸಂಭಾವನೆ ನೀಡಿದ್ದಾರಂತೆ.
Sudeep now has fame in all film industry. On top of that he is the highest paid actor as of now in kannada cinema.